A NEW DAWN FOR KARNATAKA'S COMMUNITIES ಕರ್ನಾಟಕದ ಸಮುದಾಯಗಳಿಗೆ ಹೊಸ ಉದಯ

Where the Sun Rises, Hope Begins ಸೂರ್ಯ ಉದಯಿಸುವಲ್ಲಿ ಭರವಸೆ ಮೂಡುತ್ತದೆ

Aarohana means "the rising sun." We work across Karnataka to bring light, learning and care to schools, students and villages.

ಆರೋಹಣ ಎಂದರೆ "ಉದಯಿಸುತ್ತಿರುವ ಸೂರ್ಯ". ಶಾಲೆಗಳು, ವಿದ್ಯಾರ್ಥಿಗಳು ಮತ್ತು ಗ್ರಾಮಗಳಿಗೆ ಬೆಳಕು, ಶಿಕ್ಷಣ ಮತ್ತು ಆರೈಕೆ ತಲುಪಿಸಲು ನಾವು ಕರ್ನಾಟಕದಾದ್ಯಂತ ಕೆಲಸ ಮಾಡುತ್ತೇವೆ.

About Us ನಮ್ಮ ಬಗ್ಗೆ

Aarohana Youth Foundation is a youth-led non-profit working across Karnataka. From upgrading government school facilities to guiding students toward bright careers, from rural health camps to lighting up villages every Deepavali — every initiative carries forward the spirit of our name: a new dawn.

ಆರೋಹಣ ಯುವಕರ ಪ್ರತಿಷ್ಠಾನ ಕರ್ನಾಟಕದಾದ್ಯಂತ ಕಾರ್ಯ ನಿರ್ವಹಿಸುವ ಯುವಜನರ ಸ್ವಯಂಸೇವಾ ಸಂಸ್ಥೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ಹಿಡಿದು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಗ್ರಾಮೀಣ ಆರೋಗ್ಯ ಶಿಬಿರಗಳಿಂದ ಪ್ರತಿ ದೀಪಾವಳಿಯಂದು ಗ್ರಾಮಗಳಿಗೆ ಬೆಳಕು ತಲುಪಿಸುವವರೆಗೆ — ಪ್ರತಿಯೊಂದು ಕಾರ್ಯಕ್ರಮವೂ ನಮ್ಮ ಹೆಸರಿನ ಆಶಯವನ್ನು ಮುಂದುವರಿಸುತ್ತದೆ: ಒಂದು ಹೊಸ ಉದಯ.

Our Reach So Far ನಮ್ಮ ಕಾರ್ಯಚಟುವಟಿಕೆ

40+ Government schools supported ಸರ್ಕಾರಿ ಶಾಲೆಗಳಿಗೆ ಸಹಾಯ
5,000+ Students reached ತಲುಪಿದ ವಿದ್ಯಾರ್ಥಿಗಳು
20+ Health camps held ಆರೋಗ್ಯ ಶಿಬಿರಗಳು
15+ Villages lit up ಬೆಳಕಾದ ಗ್ರಾಮಗಳು

WHAT WE DO ನಾವು ಏನು ಮಾಡುತ್ತೇವೆ

Our Programs ನಮ್ಮ ಕಾರ್ಯಕ್ರಮಗಳು

Six initiatives, one purpose — building a brighter Karnataka, one community at a time.

ಒಂದೇ ಗುರಿಯೊಂದಿಗೆ ಆರು ಕಾರ್ಯಕ್ರಮಗಳು — ಒಂದೊಂದು ಸಮುದಾಯದಿಂದ ಪ್ರಕಾಶಮಾನ ಕರ್ನಾಟಕವನ್ನು ನಿರ್ಮಿಸುವುದು.

Government School Upliftment ಸರ್ಕಾರಿ ಶಾಲಾ ಅಭಿವೃದ್ಧಿ

Improving infrastructure, classrooms and learning resources in government schools across Karnataka.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ತರಗತಿ ಕೊಠಡಿಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಉತ್ತಮಗೊಳಿಸುವುದು.

Career Guidance ವೃತ್ತಿ ಮಾರ್ಗದರ್ಶನ

Helping school and college students discover the right path through mentorship and guidance sessions.

ಮಾರ್ಗದರ್ಶನ ಮತ್ತು ಸಲಹಾ ಕಾರ್ಯಕ್ರಮಗಳ ಮೂಲಕ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ಕಂಡುಕೊಳ್ಳಲು ಸಹಾಯ.

Health Camps & Awareness ಆರೋಗ್ಯ ಶಿಬಿರ ಮತ್ತು ಜಾಗೃತಿ

Free medical checkup camps and awareness drives for rural communities.

ಗ್ರಾಮೀಣ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಜಾಗೃತಿ ಅಭಿಯಾನಗಳು.

Tree Plantation ಸಸಿ ನೆಡುವಿಕೆ

Planting trees with local communities to build a greener, healthier future.

ಹಸಿರು ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಸ್ಥಳೀಯ ಸಮುದಾಯಗಳೊಂದಿಗೆ ಸಸಿ ನೆಡುವ ಕಾರ್ಯಕ್ರಮ.

School Kits & Essentials ಶಾಲಾ ಸಾಮಗ್ರಿ ವಿತರಣೆ

Distributing bags, books and essentials to government school students in need.

ಅಗತ್ಯವಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಮತ್ತು ಅಗತ್ಯ ವಸ್ತುಗಳ ವಿತರಣೆ.

Deepavali Lamp Lighting ದೀಪಾವಳಿ ಬೆಳಕಿನ ಯೋಜನೆ

Installing high-mast lamps in dark villages, every festival of lights.

ಪ್ರತಿ ದೀಪಾವಳಿಯಂದು ಕತ್ತಲ ಗ್ರಾಮಗಳಲ್ಲಿ ಹೈ ಮಾಸ್ಟ್ ದೀಪಗಳ ಅಳವಡಿಕೆ.

OUR SIGNATURE INITIATIVE ನಮ್ಮ ವಿಶೇಷ ಕಾರ್ಯಕ್ರಮ

From Darkness to Brightness ಕತ್ತಲಿನಿಂದ ಬೆಳಕಿನೆಡೆಗೆ

Many villages in Karnataka still have no streetlights. Every Deepavali, Aarohana installs high-mast lamps that turn the festival of lights into lasting brightness — long after the diyas burn out.

ಕರ್ನಾಟಕದ ಹಲವು ಗ್ರಾಮಗಳಲ್ಲಿ ಇಂದಿಗೂ ಬೀದಿ ದೀಪಗಳಿಲ್ಲ. ಪ್ರತಿ ದೀಪಾವಳಿಯಂದು, ಆರೋಹಣ ಹೈ ಮಾಸ್ಟ್ ದೀಪಗಳನ್ನು ಅಳವಡಿಸಿ, ದೀಪಗಳ ಹಬ್ಬವನ್ನು ಶಾಶ್ವತ ಬೆಳಕಾಗಿ ಪರಿವರ್ತಿಸುತ್ತದೆ — ದೀಪಗಳು ಆರಿದ ನಂತರವೂ.

JOIN THE SUNRISE ಉದಯದಲ್ಲಿ ಪಾಲ್ಗೊಳ್ಳಿ

Get Involved ನಮ್ಮೊಂದಿಗೆ ಸೇರಿ

Whether it's your time, your support, or your network — there's a place for you in Aarohana's work.

ನಿಮ್ಮ ಸಮಯ, ನಿಮ್ಮ ಬೆಂಬಲ ಅಥವಾ ನಿಮ್ಮ ಸಂಪರ್ಕ — ಆರೋಹಣದ ಕಾರ್ಯದಲ್ಲಿ ನಿಮಗೆ ಒಂದು ಸ್ಥಾನವಿದೆ.

Volunteer With Us ಸ್ವಯಂಸೇವಕರಾಗಿ ಸೇರಿ

Give your time at school programs, health camps or our Deepavali lamp drives.

ಶಾಲಾ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಅಥವಾ ದೀಪಾವಳಿ ದೀಪೋತ್ಸವದಲ್ಲಿ ನಿಮ್ಮ ಸಮಯ ನೀಡಿ.

Volunteer / ಸೇರಿ

Donate ದಾನ ಮಾಡಿ

Your contribution funds school kits, health camps and high-mast lamps for villages.

ನಿಮ್ಮ ದೇಣಿಗೆಯು ಶಾಲಾ ಸಾಮಗ್ರಿ, ಆರೋಗ್ಯ ಶಿಬಿರ ಮತ್ತು ಗ್ರಾಮಗಳಿಗೆ ದೀಪಗಳಿಗೆ ಸಹಾಯ ಮಾಡುತ್ತದೆ.

Donate / ದಾನ ಮಾಡಿ

Partner With Us ಸಹಭಾಗಿತ್ವ

Schools, hospitals, businesses and local panchayats — let's work together.

ಶಾಲೆಗಳು, ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳೊಂದಿಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡೋಣ.

Partner / ಸಂಪರ್ಕಿಸಿ